ಅದೊಂದು ಸಾಯಂಕಾಲ. office ನ politics , management ಕಿರಿಕಿರಿ, hectic ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಮಯ. ಮನೆಗೆ ತೆರಳುವ ದಾರಿಯಲ್ಲಿರೋ Juice ಅಂಗಡಿಯತ್ತ ಕಣ್ಣು ಹಾಯಿಸಿದರೆ ಅಲ್ಲೊಬ್ಬಳು ಸುಂದರ ಕನ್ಯೆ. ಅದು ನೀನೆ ಅಂತ ತಿಳಿದಾಗಲಂತೂ ಮನಸಲ್ಲಿ ಮತ್ತಷ್ಟು ತಳಮಳ. ಬಿಸಿ ರಕ್ತ, ಯುವ ಹೃದಯ , ಅಚಂಚಲ ಮನಸ್ಸು ನನ್ನನ್ನಂತೂ ನಿನ್ನತ್ತ ಆಕರ್ಷಿಸಿದ್ದಂತೂ ಸುಳ್ಳಲ್ಲ. Juice ನೆಪದಲ್ಲಿ ನಾನಂತು ನಿನ್ನ ನೋಡಲೆಂದೇ ಸಮೀಪ ಬಂದರೆ ನೀನು ಕೂಡ ನನ್ನತ್ತ stare ಕೊಡುವುದೇ.? ನಿನ್ನ ಮೈಮಾಟ ಕ್ಕೆ ಬಣ್ಣ ಹಚ್ಚಿದ ತುಟಿ, ಕಪ್ಪು t-shirt , ತೊಡೆ ತೋರಿಸುತ್ತಿದ್ದ ಚಡ್ಡಿ , pony ಕೂದಲು ಮತ್ತಸ್ತು ಬೆರಗು ಕೊಡುತ್ತಿತ್ತು. ಅದೇಕೋ ಮತ್ತೆ ಮತ್ತೆ ನಿನ್ನನ್ನು ನೋಡಬೇಕೆಂಬ ಹಂಬಲ, ಆದರೆ ಆ ವೇಷವಂತೂ ನನಗೆ ಸೂಚನೆ ಕೊಟ್ಟಿತ್ತು ನೀನಾವಾಗಲೇ gym ಮಾಡಿ body build ಮಾಡಿ ಬರುತ್ತಿರುವವಳೆಂದು. ನೇರ ನೋಡಲು ನನ್ನ ದೇಹವಂತೂ ಬೆದರಿ ಹೋಗಿತ್ತು. ಆದರೂ Juice ಕುಡಿಯುವ ನೆಪದಲ್ಲಿ ಓರೆ ಕಣ್ಣಲ್ಲಿ ನಿನ್ನನ್ನು ಮತ್ತೆ ಮತ್ತೆ ನೋಡಿಕೊಂಡು Katrina Kaif ನ Slice ತುಟಿಗೆ ನಿನ್ನ ತುಟಿಯನ್ನು ಹೊಲಿಸುತ್ತಿರುವಾಗಲೇ ನೀನು bill pay ಮಡಿ ನನ್ನತ್ತ ಒಮ್ಮೆ ಗುರಾಯಿಸಿದ್ದನ್ನು ನಾನಂತು ಗಮನಿಸಿದ್ದೇನೆ. ಅಮರ ಪ್ರೇಮಿಯಂತೆ ನೀನು ನಡೆದು ತೆರಳುತ್ತಿರುವಾಗ ನಾನು ಸ್ವಲ್ಪ ಹೊತ್ತು ನಿನ್ನ ಹಿಂಬಾಲಿಸಿದ್ದು ನಿನಗೆ ಕೂಡ ತಿಳಿದೇ ಇದೆ. ಆದರೂ ನೀನು ಆ ಜನಜಂಗುಳಿಯಲ್ಲಿ ಮಾಯವಾಗುವಾಗ ನಾನಂತು ಪಲ್ಯದಲ್ಲಿ ಸಾಸಿವೆಗಾಗಿ ಹುಡುಕಿದಂತೆ ಹುಡುಕಿದ್ದೇನೆ. ಈಗ ಕೂಡ ನನ್ನ ಮನಸು ನಿನ್ನ ಆ lipstick , ಕಪ್ಪು t-shirt ನ್ನು ಹುಡುಕುತ್ತಾ ಇದೆ.
ಅದೇಕೋ ನಿನಗೆ ಇಷ್ಟವಾಗಲಿಲ್ಲವೋ ಅಥವಾ ನಾನೆ ಹುಡುಕಿಕೊಂಡು ಬರಲಿ ಎಂಬುದು ನಿನ್ನ ಮನದಾಸೆಯೋ. ನಾನಂತು ಯಾವಾಗಲೂ Juice ಅಂಗಡಿಯತ್ತ ಕಣ್ಣು ಹಾಯಿಸುವುದನ್ನು ರೂಢಿ ಮಾಡಿಕೊಂಡಿದ್ದೇನೆ. ನಿನ್ನ ಭೇಟಿ ಮತ್ತೆ ಅಲ್ಲೇ ಆಗುತ್ತದೆ ಎಂಬ ಆಶಾಭಾವನೆ ನನಗಿದೆ.
ಅಮರ ಪ್ರೇಮಿ,
ನಿನ್ನವನು.
Loo sisyaa.....
ReplyDeletePuna bhavili bidhya??????
ಕುಮಾರ...
ReplyDelete"ಜನಜಂಗುಳಿಯಲ್ಲಿ ಮಾಯವಾಗುವಾಗ ನಾನಂತು ಪಲ್ಯದಲ್ಲಿ ಸಾಸಿವೆಗಾಗಿ ಹುಡುಕಿದಂತೆ"
ಉಪಮೆ ಹಾಗೂ ಪದಲಾಲಿತ್ಯ ಸೂಪರ್... all the best
ಶುಭಾಶಯಗಳೊಂದಿಗೆ,
-ಗಿರಿ
ಗಿರಿ, ಧನ್ಯವಾದಗಳು..
ReplyDeleteಭುವಿ, ಬಾವಿ ಗೀವಿ ಏನು ಇಲ್ಲಪ್ಪ..ಅದೊಂದು ಕಾಲ್ಪನಿಕ ಬರಹ ಅಸ್ಟೆ ;)
choor jaasti aan....;-) palyadalli nee elli saasive hudukti? sikre saakanta tinnod matra nodideeni....;-)
ReplyDelete