ಪ್ರೇಮಕ್ಕೆ ಬಿದ್ದ ಹುಡುಗಿಯ ಬಾಯಿಯಲ್ಲಿ ಬರುವ ೧೦ ಮಾತುಗಳು.
೧. ನಾನು ನಿನ್ನ ಪ್ರೀತಿಸುವೆ.
೨. ನಿನ್ನ ಬಿಟ್ಟು ಯಾರನ್ನು ಲವ್ ಮಾಡಲ್ಲ.
೩. ನನ್ನ ಅಪ್ಪ ಅಮ್ಮನ ನಾನೆ ಒಪ್ಪಿಸ್ತೀನಿ.
೪. ನೀನು ತುಂಬಾ ಒಳ್ಳೆಯವನು.
೫. ಅಕಸ್ಮಾತ್ ಅಪ್ಪ ಅಮ್ಮ ಒಪ್ಪದಿದ್ರೆ ಇಬ್ರೂ ಸಾಯೋಣ.
೬. ನಿನ್ನ ಇಸ್ಟನೆ ನನ್ನ ಇಷ್ಟ.
೭. ನೀನು ನನ್ನ ಸ್ವೀಟ್ ಹಾರ್ಟ್
೮. ನಿನ್ನಂತ ಹುಡುಗನ ಪಡೆಯೋಕೆ ನಾನು ಏಳು ಜನ್ಮದ ಪುಣ್ಯ ಮಾಡಿರಬೇಕು.
೯. ಪ್ರಾಣ ಬಿಟ್ರು ನಿನ್ನ ಬಿಡಲ್ಲ.
ಕೊನೆಗೆ, ಕೈ ಕೊಟ್ಟಾದಮೇಲೆ
೧೦. ನಿನಗೆ ನನಗಿಂತ ಒಳ್ಳೆ ಹುಡುಗಿ ಸಿಗ್ತಾಳೆ.
Friday, July 16, 2010
Sunday, July 4, 2010
ಸೆಳೆತ
ಒಲವು ಎಂಬುದು ಚೆಲುವಿನಲ್ಲಿ ಇರುವುದಲ್ಲ ಎಂಬುದು ಆಗಲೇ ಅರಿವಾಗಿತ್ತು. ಮದುವೆ ನಿಶ್ಚಿತಾರ್ಥಕ್ಕೆ ಬಂದವನಿಗೆ ನೀನು ಅಂದು ಚೆಂದುಳ್ಳಿ ಚೆಲುವೆಯಾಗಿ ಕಾಣಿಸಿದ್ದೆ. ನಿನ್ನ ಮುಗ್ಧ ನಗುವಲ್ಲಿ ಮಾದಕತೆಯನ್ನು ಕಂಡವನು ನಾನು. ನಿನ್ನ ಪಾದರಸದ ನಡಿಗೆ, ಗೆಜ್ಜೆ ನಿನಾದ, ಮಲ್ಲಿಗೆ ಸುವಾಸನೆ ಅಂದು ನನ್ನ ಗಮನವನ್ನು ಸೆಳೆದಿತ್ತು. ನಿನ್ನ ನೋಡುವ ನೆಪದಲ್ಲಿ ನಾನಂತೂ ನೀನು ಹಂಚುತ್ತಿದ್ದ ಪಾನೀಯವನ್ನು ಸಿಕ್ಕಾಪಟ್ಟೆ ಕುಡಿದು ಮರುದಿನ ಹಾಸಿಗೆಯಲ್ಲಿ ಮಲಗಿದ್ದು ಸತ್ಯವೇ. ಆ ದಿನ ನಮ್ಮ ಮುಖಾಮುಖಿ ಭೇಟಿಯಂತೂ ಬಹಳ ಬಾರಿ ಆಗಿತ್ತು. ಎತ್ತ ಸಾಗಿದರೂ ನಿನ್ನ ಮುಖ ದರ್ಶನವಾಗುತ್ತಿತ್ತು. ನೀನೇ ನನ್ನ ಬಳಿ ಬರುತ್ತಿದ್ದೆಯೋ ಅಥವಾ ನಾನೆ ನಿನ್ನ ಬಳಿ ಸುಳಿದಾಡುತ್ತಿದ್ದೆನೋ ಎಂಬುದು ನನಗೀಗಲೂ ಅರ್ಥವಾಗದ ಸಂಗತಿ. ದಿನ ಮುಗಿದು ನಿನ್ನನ್ನು ಕಣ್ಣಲ್ಲೇ ಬೀಳ್ಕೊಟ್ಟು ಮನೆಯತ್ತ ತೆರಳುವಾಗ ನನ್ನ ಮನಸ್ಸು ಮಾತ್ರ K.S.Nissar Ahmad ರವರ "ಮತ್ತದೇ ಬೇಸರ, ಅದೇ ಸಂಜೆ , ಅದೇ ಏಕಾಂತ" ಹಾಡನ್ನು ಗುನುಗುತ್ತಿತ್ತು. ಅದಾಗಿಯೂ ನೀನು ನನ್ನ ಹತ್ತಿರದ ಸಂಭಂಧಿಯಾಗುತ್ತಿರುವೆ ಎಂಬುದು ಅರಿತಾಗಲಂತೂ ಆದ ಸಂತಸ ಅಸ್ಟಿಸ್ಟಲ್ಲ.
ಗೆಳೆಯ ಗೆಳತಿಯರ ಹಲವು ದಿನಗಳ ಕೀಟಲೆಗಳ ನಂತರ ಮದುವೆಯ ದಿನ ಬಂದೆ ಬಿಟ್ಟಿತು. ನೀನು ಖಂಡಿತವಾಗಿಯೂ ಮದುವೆಗೆ ಬರುತ್ತಿ ಎಂದು ತಿಳಿದ ನಾನು ಮದುಮಗನಿಗಿಂತಲೂ ಹೆಚ್ಚಿನ ಅಲಂಕಾರ ಮಾಡಿ ಅಂದು ಹೊರಟಿದ್ದೆ. ದಪ್ಪ ಕಾಣಲು ಗೆಳೆಯನ ಸಲಹೆ ಮೇರೆಗೆ, ಸುಡುಬಿಸಿಲಿನ May ತಿಂಗಳಲ್ಲಿಯೂ sheravani ಒಳಗಡಿ sweatter ಹಾಕಿದ್ದೆ. ಛತ್ರ ಕ್ಕೆ ನಾನು ಹಾಜರಾಗುವ ಮೊದಲೇ ಅಲ್ಲಿ ನೀನು ಹಾಜರಾಗಿದ್ದೆ. ನಾನು ಒಳಗೆ ಬರುತ್ತಿದ್ದಂತೆ ನಿನ್ನಿಂದ ಪನ್ನೇರ ಸಿಂಚನ. ಅದರ ಹಿಂದೆ ಏನು ಉದ್ದೇಶವಿತ್ತೋ ಅಥವಾ ಅದು ಬರೀ ನನ್ನ ಕಲ್ಪನೆಯೂ ನಾ ಕಾಣೆ. Silver ಬಣ್ಣದ ಸೀರೆ, ಜಡೆಗೆ ಮಲ್ಲಿಗೆ, ಕೈ ಪೂರ್ತಿ ಬಳೆ ತೊಟ್ಟು ನೀನು ಮದುಮಗಳಂತೆ ಕಂಗೊಳಿಸುತ್ತಿದ್ದರೆ ನಾನಂತು ಪುಳಕಿತನಾಗಿದ್ದೆ. ಮನಸು ತಾಳಲಾರದೆ ಕಣ್ಣು ಮತ್ತೆ ಮತ್ತೆ ನಿನ್ನತ್ತ ನೋಟ ಬೀರುತ್ತಿತ್ತು. ನೀನು Juice ಹಿಡಿದುಕೊಂಡು ಗಂಗಮ್ಮನಂತೆ ಬರುತ್ತಿರಬೇಕಾದರೆ ನಿನ್ನಲ್ಲಿ ಸಾಧು ಸ್ವಭಾವದ ಒನಕೆ ಓಬವ್ವನನ್ನು ಕಂಡವನು ನಾನು. ಅದೇಕೋ ಅಂದು ನೀನು ನನ್ನತ್ತ Juice trey ಹಿಡಿದುಕೊಂಡು ಬರಲೇ ಇಲ್ಲ. ನಾನೆಲ್ಲಿ ನಿನ್ನತ್ತ ನೇರ ನೋಟ ಬೀರುವೆನೆಂಬ ಭಯವೋ ಅಲ್ಲ ನನ್ನ ಜೊತೆಗಿದ್ದದ್ದ ಕಿಲಾಡಿ ಗೆಳೆಯರ ಕಾಮೆಂಟ್ ಗಳ ಭಯವೋ ನೀನು trey ಯನ್ನು ಮತ್ಯಾರದೋ ಕೈಗೆ ಹಸ್ತಾಂತರ ಮಾಡುವಂತೆ ಪ್ರಚೋದಿಸಿತು. ಬೆಂಬಿಡದ ಬೇತಾಳನಂತೆ ಹಿಂಬಾಲಿಸಿದ ನಾನು ನೀನು Buffet ಲ್ಲಿ ಮಜ್ಜಿಗೆ ಬಡಿಸುತ್ತಿದ್ದುದನ್ನು ಕಂಡು ಅಲ್ಲೂ ಹಾಜರಿದ್ದೆ. ಆದರೇಕೋ ಮಾತನಾಡಿಸಲು ಸಂಕೋಚವಾಗಿ ನಾನಾಗಿಯೇ ಬಡಿಸಿಕೊಂಡಿದ್ದೆ.
ಅದರೂ ನಮ್ಮ Common friend ಮೂಲಕ ನಿನ್ನ ವಿಷಯಗಳು ನನ್ನ ಬಾಯಲ್ಲಿ ಸರಾಗವಾಗಿ ಹರಿದಾಡುತ್ತಾ ಇದೆ. ನೀನಗೂ ಆಕೆ ನನ್ನ ಬಗ್ಗೆ ಹೇಳಿ irritate ಮಾಡುತ್ತಾಳೆ ಎಂದು ಸರ್ವರಿಗೂ ಗೊತ್ತಿದೆ. ನಾವಂತೂ ಮತ್ತೆ ಮತ್ತೆ ಭೇಟಿಯಾಗುತ್ತಿದ್ದೇವೆ. ಮಾತನಾಡಿಸುವ ದೈರ್ಯ ನನಗಂತೂ ಇಲ್ಲ. ನಿನಗೆ ಕೂಡ ಇಲ್ಲವೆಂದು ನನಗೆ ಗೊತ್ತು. ನಮ್ಮಿಬ್ಬರ ಗೆಳತಿಯ ಮೂಲಕ Introduce ಮಾಡಿ ಕೊಡು ಎಂದು ಹೇಳಿಯಾಗಿದೆ, ಮುಹೂರ್ಥವೂ fix ಆಗಿದೆ. ಆ ಭೇಟಿಗೊಸ್ಕರ ಕಾಯುತ್ತ ಇದ್ದೇನೆ.
ಸೂಚನೆ : ಈ ಬರಹ ಕಾಲ್ಪನಿಕ. ಯಾರದ್ದಾದರೂ ಜೀವನಕ್ಕೆ ತಾಳೆಯಾಗುತ್ತಿದ್ದಲ್ಲೇ ಬರಹಗಾರನು ಜವಾಬ್ದಾರನಲ್ಲ.

ಹಗಲು ಕನಸು
ಅದೊಂದು ಸಾಯಂಕಾಲ. office ನ politics , management ಕಿರಿಕಿರಿ, hectic ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಮಯ. ಮನೆಗೆ ತೆರಳುವ ದಾರಿಯಲ್ಲಿರೋ Juice ಅಂಗಡಿಯತ್ತ ಕಣ್ಣು ಹಾಯಿಸಿದರೆ ಅಲ್ಲೊಬ್ಬಳು ಸುಂದರ ಕನ್ಯೆ. ಅದು ನೀನೆ ಅಂತ ತಿಳಿದಾಗಲಂತೂ ಮನಸಲ್ಲಿ ಮತ್ತಷ್ಟು ತಳಮಳ. ಬಿಸಿ ರಕ್ತ, ಯುವ ಹೃದಯ , ಅಚಂಚಲ ಮನಸ್ಸು ನನ್ನನ್ನಂತೂ ನಿನ್ನತ್ತ ಆಕರ್ಷಿಸಿದ್ದಂತೂ ಸುಳ್ಳಲ್ಲ. Juice ನೆಪದಲ್ಲಿ ನಾನಂತು ನಿನ್ನ ನೋಡಲೆಂದೇ ಸಮೀಪ ಬಂದರೆ ನೀನು ಕೂಡ ನನ್ನತ್ತ stare ಕೊಡುವುದೇ.? ನಿನ್ನ ಮೈಮಾಟ ಕ್ಕೆ ಬಣ್ಣ ಹಚ್ಚಿದ ತುಟಿ, ಕಪ್ಪು t-shirt , ತೊಡೆ ತೋರಿಸುತ್ತಿದ್ದ ಚಡ್ಡಿ , pony ಕೂದಲು ಮತ್ತಸ್ತು ಬೆರಗು ಕೊಡುತ್ತಿತ್ತು. ಅದೇಕೋ ಮತ್ತೆ ಮತ್ತೆ ನಿನ್ನನ್ನು ನೋಡಬೇಕೆಂಬ ಹಂಬಲ, ಆದರೆ ಆ ವೇಷವಂತೂ ನನಗೆ ಸೂಚನೆ ಕೊಟ್ಟಿತ್ತು ನೀನಾವಾಗಲೇ gym ಮಾಡಿ body build ಮಾಡಿ ಬರುತ್ತಿರುವವಳೆಂದು. ನೇರ ನೋಡಲು ನನ್ನ ದೇಹವಂತೂ ಬೆದರಿ ಹೋಗಿತ್ತು. ಆದರೂ Juice ಕುಡಿಯುವ ನೆಪದಲ್ಲಿ ಓರೆ ಕಣ್ಣಲ್ಲಿ ನಿನ್ನನ್ನು ಮತ್ತೆ ಮತ್ತೆ ನೋಡಿಕೊಂಡು Katrina Kaif ನ Slice ತುಟಿಗೆ ನಿನ್ನ ತುಟಿಯನ್ನು ಹೊಲಿಸುತ್ತಿರುವಾಗಲೇ ನೀನು bill pay ಮಡಿ ನನ್ನತ್ತ ಒಮ್ಮೆ ಗುರಾಯಿಸಿದ್ದನ್ನು ನಾನಂತು ಗಮನಿಸಿದ್ದೇನೆ. ಅಮರ ಪ್ರೇಮಿಯಂತೆ ನೀನು ನಡೆದು ತೆರಳುತ್ತಿರುವಾಗ ನಾನು ಸ್ವಲ್ಪ ಹೊತ್ತು ನಿನ್ನ ಹಿಂಬಾಲಿಸಿದ್ದು ನಿನಗೆ ಕೂಡ ತಿಳಿದೇ ಇದೆ. ಆದರೂ ನೀನು ಆ ಜನಜಂಗುಳಿಯಲ್ಲಿ ಮಾಯವಾಗುವಾಗ ನಾನಂತು ಪಲ್ಯದಲ್ಲಿ ಸಾಸಿವೆಗಾಗಿ ಹುಡುಕಿದಂತೆ ಹುಡುಕಿದ್ದೇನೆ. ಈಗ ಕೂಡ ನನ್ನ ಮನಸು ನಿನ್ನ ಆ lipstick , ಕಪ್ಪು t-shirt ನ್ನು ಹುಡುಕುತ್ತಾ ಇದೆ.
ಅದೇಕೋ ನಿನಗೆ ಇಷ್ಟವಾಗಲಿಲ್ಲವೋ ಅಥವಾ ನಾನೆ ಹುಡುಕಿಕೊಂಡು ಬರಲಿ ಎಂಬುದು ನಿನ್ನ ಮನದಾಸೆಯೋ. ನಾನಂತು ಯಾವಾಗಲೂ Juice ಅಂಗಡಿಯತ್ತ ಕಣ್ಣು ಹಾಯಿಸುವುದನ್ನು ರೂಢಿ ಮಾಡಿಕೊಂಡಿದ್ದೇನೆ. ನಿನ್ನ ಭೇಟಿ ಮತ್ತೆ ಅಲ್ಲೇ ಆಗುತ್ತದೆ ಎಂಬ ಆಶಾಭಾವನೆ ನನಗಿದೆ.
ಅಮರ ಪ್ರೇಮಿ,
ನಿನ್ನವನು.

ಬ್ಲೋಗೆಶ್ವರ
ಬ್ಲಾಗ್ ಬರೆದು ನಾನು ಒಬ್ಬ ಬ್ಲೋಗೆಶ್ವರ ಆಗಬೇಕೆಂಬ ಬಯಕೆ ಬಹಳ ದಿನದ್ದು.. ಅಂತು ಇಂತೂ ಮುಹೂರ್ತ ಕೂಡಿ ಬಂತು.
Subscribe to:
Posts (Atom)