Sunday, July 4, 2010

ಸೆಳೆತ

ಒಲವು ಎಂಬುದು ಚೆಲುವಿನಲ್ಲಿ ಇರುವುದಲ್ಲ ಎಂಬುದು ಆಗಲೇ ಅರಿವಾಗಿತ್ತು. ಮದುವೆ ನಿಶ್ಚಿತಾರ್ಥಕ್ಕೆ ಬಂದವನಿಗೆ ನೀನು ಅಂದು ಚೆಂದುಳ್ಳಿ ಚೆಲುವೆಯಾಗಿ ಕಾಣಿಸಿದ್ದೆ. ನಿನ್ನ ಮುಗ್ಧ ನಗುವಲ್ಲಿ ಮಾದಕತೆಯನ್ನು ಕಂಡವನು ನಾನು. ನಿನ್ನ ಪಾದರಸದ ನಡಿಗೆ, ಗೆಜ್ಜೆ ನಿನಾದ, ಮಲ್ಲಿಗೆ ಸುವಾಸನೆ ಅಂದು ನನ್ನ ಗಮನವನ್ನು ಸೆಳೆದಿತ್ತು. ನಿನ್ನ ನೋಡುವ ನೆಪದಲ್ಲಿ ನಾನಂತೂ ನೀನು ಹಂಚುತ್ತಿದ್ದ ಪಾನೀಯವನ್ನು ಸಿಕ್ಕಾಪಟ್ಟೆ ಕುಡಿದು ಮರುದಿನ ಹಾಸಿಗೆಯಲ್ಲಿ ಮಲಗಿದ್ದು ಸತ್ಯವೇ. ಆ ದಿನ ನಮ್ಮ ಮುಖಾಮುಖಿ ಭೇಟಿಯಂತೂ ಬಹಳ ಬಾರಿ ಆಗಿತ್ತು. ಎತ್ತ ಸಾಗಿದರೂ ನಿನ್ನ ಮುಖ ದರ್ಶನವಾಗುತ್ತಿತ್ತು. ನೀನೇ ನನ್ನ ಬಳಿ ಬರುತ್ತಿದ್ದೆಯೋ ಅಥವಾ ನಾನೆ ನಿನ್ನ ಬಳಿ ಸುಳಿದಾಡುತ್ತಿದ್ದೆನೋ ಎಂಬುದು ನನಗೀಗಲೂ ಅರ್ಥವಾಗದ ಸಂಗತಿ. ದಿನ ಮುಗಿದು ನಿನ್ನನ್ನು ಕಣ್ಣಲ್ಲೇ ಬೀಳ್ಕೊಟ್ಟು ಮನೆಯತ್ತ ತೆರಳುವಾಗ ನನ್ನ ಮನಸ್ಸು ಮಾತ್ರ K.S.Nissar Ahmad ರವರ "ಮತ್ತದೇ ಬೇಸರ, ಅದೇ ಸಂಜೆ , ಅದೇ ಏಕಾಂತ" ಹಾಡನ್ನು ಗುನುಗುತ್ತಿತ್ತು. ಅದಾಗಿಯೂ ನೀನು ನನ್ನ ಹತ್ತಿರದ ಸಂಭಂಧಿಯಾಗುತ್ತಿರುವೆ ಎಂಬುದು ಅರಿತಾಗಲಂತೂ ಆದ ಸಂತಸ ಅಸ್ಟಿಸ್ಟಲ್ಲ.
ಗೆಳೆಯ ಗೆಳತಿಯರ ಹಲವು ದಿನಗಳ ಕೀಟಲೆಗಳ ನಂತರ ಮದುವೆಯ ದಿನ ಬಂದೆ ಬಿಟ್ಟಿತು. ನೀನು ಖಂಡಿತವಾಗಿಯೂ ಮದುವೆಗೆ ಬರುತ್ತಿ ಎಂದು ತಿಳಿದ ನಾನು ಮದುಮಗನಿಗಿಂತಲೂ ಹೆಚ್ಚಿನ ಅಲಂಕಾರ ಮಾಡಿ ಅಂದು ಹೊರಟಿದ್ದೆ. ದಪ್ಪ ಕಾಣಲು ಗೆಳೆಯನ ಸಲಹೆ ಮೇರೆಗೆ, ಸುಡುಬಿಸಿಲಿನ May ತಿಂಗಳಲ್ಲಿಯೂ sheravani ಒಳಗಡಿ sweatter ಹಾಕಿದ್ದೆ. ಛತ್ರ ಕ್ಕೆ ನಾನು ಹಾಜರಾಗುವ ಮೊದಲೇ ಅಲ್ಲಿ ನೀನು ಹಾಜರಾಗಿದ್ದೆ. ನಾನು ಒಳಗೆ ಬರುತ್ತಿದ್ದಂತೆ ನಿನ್ನಿಂದ ಪನ್ನೇರ ಸಿಂಚನ. ಅದರ ಹಿಂದೆ ಏನು ಉದ್ದೇಶವಿತ್ತೋ ಅಥವಾ ಅದು ಬರೀ ನನ್ನ ಕಲ್ಪನೆಯೂ ನಾ ಕಾಣೆ. Silver ಬಣ್ಣದ ಸೀರೆ, ಜಡೆಗೆ ಮಲ್ಲಿಗೆ, ಕೈ ಪೂರ್ತಿ ಬಳೆ ತೊಟ್ಟು ನೀನು ಮದುಮಗಳಂತೆ ಕಂಗೊಳಿಸುತ್ತಿದ್ದರೆ ನಾನಂತು ಪುಳಕಿತನಾಗಿದ್ದೆ. ಮನಸು ತಾಳಲಾರದೆ ಕಣ್ಣು ಮತ್ತೆ ಮತ್ತೆ ನಿನ್ನತ್ತ ನೋಟ ಬೀರುತ್ತಿತ್ತು. ನೀನು Juice ಹಿಡಿದುಕೊಂಡು ಗಂಗಮ್ಮನಂತೆ ಬರುತ್ತಿರಬೇಕಾದರೆ ನಿನ್ನಲ್ಲಿ ಸಾಧು ಸ್ವಭಾವದ ಒನಕೆ ಓಬವ್ವನನ್ನು ಕಂಡವನು ನಾನು. ಅದೇಕೋ ಅಂದು ನೀನು ನನ್ನತ್ತ Juice trey ಹಿಡಿದುಕೊಂಡು ಬರಲೇ ಇಲ್ಲ. ನಾನೆಲ್ಲಿ ನಿನ್ನತ್ತ ನೇರ ನೋಟ ಬೀರುವೆನೆಂಬ ಭಯವೋ ಅಲ್ಲ ನನ್ನ ಜೊತೆಗಿದ್ದದ್ದ ಕಿಲಾಡಿ ಗೆಳೆಯರ ಕಾಮೆಂಟ್ ಗಳ ಭಯವೋ ನೀನು trey ಯನ್ನು ಮತ್ಯಾರದೋ ಕೈಗೆ ಹಸ್ತಾಂತರ ಮಾಡುವಂತೆ ಪ್ರಚೋದಿಸಿತು. ಬೆಂಬಿಡದ ಬೇತಾಳನಂತೆ ಹಿಂಬಾಲಿಸಿದ ನಾನು ನೀನು Buffet ಲ್ಲಿ ಮಜ್ಜಿಗೆ ಬಡಿಸುತ್ತಿದ್ದುದನ್ನು ಕಂಡು ಅಲ್ಲೂ ಹಾಜರಿದ್ದೆ. ಆದರೇಕೋ ಮಾತನಾಡಿಸಲು ಸಂಕೋಚವಾಗಿ ನಾನಾಗಿಯೇ ಬಡಿಸಿಕೊಂಡಿದ್ದೆ.
ಅದರೂ ನಮ್ಮ Common friend ಮೂಲಕ ನಿನ್ನ ವಿಷಯಗಳು ನನ್ನ ಬಾಯಲ್ಲಿ ಸರಾಗವಾಗಿ ಹರಿದಾಡುತ್ತಾ ಇದೆ. ನೀನಗೂ ಆಕೆ ನನ್ನ ಬಗ್ಗೆ ಹೇಳಿ irritate ಮಾಡುತ್ತಾಳೆ ಎಂದು ಸರ್ವರಿಗೂ ಗೊತ್ತಿದೆ. ನಾವಂತೂ ಮತ್ತೆ ಮತ್ತೆ ಭೇಟಿಯಾಗುತ್ತಿದ್ದೇವೆ. ಮಾತನಾಡಿಸುವ ದೈರ್ಯ ನನಗಂತೂ ಇಲ್ಲ. ನಿನಗೆ ಕೂಡ ಇಲ್ಲವೆಂದು ನನಗೆ ಗೊತ್ತು. ನಮ್ಮಿಬ್ಬರ ಗೆಳತಿಯ ಮೂಲಕ Introduce ಮಾಡಿ ಕೊಡು ಎಂದು ಹೇಳಿಯಾಗಿದೆ, ಮುಹೂರ್ಥವೂ fix ಆಗಿದೆ. ಆ ಭೇಟಿಗೊಸ್ಕರ ಕಾಯುತ್ತ ಇದ್ದೇನೆ.

ಸೂಚನೆ : ಈ ಬರಹ ಕಾಲ್ಪನಿಕ. ಯಾರದ್ದಾದರೂ ಜೀವನಕ್ಕೆ ತಾಳೆಯಾಗುತ್ತಿದ್ದಲ್ಲೇ ಬರಹಗಾರನು ಜವಾಬ್ದಾರನಲ್ಲ.

6 comments:

  1. ನಿಮ್ಮ ಬ್ಲಾಗ್ ಓದಿ ತುಂಬಾ ಸಂತೋಷ ಆಯಿತು.ನಿಮ್ಮ ಹೃದಯದಲ್ಲಿ ಕವಿ ಅಡಗಿ ಕುಳಿತಿದ್ದಾನೆ.All the best dear..

    ReplyDelete
  2. ಯುವ(ಕ) ಬರಹಗಾರ ಕುಮಾರ...

    ಕಲ್ಪನಾತೀತ ಬರಹ!!
    ಸುಂದರವಾಗಿದೆ...

    ಶುಭಾಶಯಗಳೊಂದಿಗೆ,
    -ಗಿರಿ

    ReplyDelete
  3. ಯತೀಶ, ಅಹುದು...ಅದು ಬರೀ ಕಾಲ್ಪನಿಕ..
    ಗಿರಿ, ಗುರು, ಧನ್ಯವಾದಗಳು..
    ಪ್ರವೀಣ, ಧನ್ಯವಾದಗಳು.. ಒರೊಕ್ಕು :)

    ReplyDelete
  4. superb dear....as i said...am tellin 4m my heart...neenu ist chennagi baritiyanta gottirlilla....cary on...i wish u al d best..

    ReplyDelete