Monday, September 6, 2010

ಮೋಸ

ಅಂದು ಭಾನುವಾರ. ಗೆಳೆಯರೆಲ್ಲರೂ ಆಲದ ಮರದ ಕಟ್ಟೆಯಲ್ಲಿ ಸೇರುವ ದಿನ. ಎಂದಿನಂತೆ ೫ ಗಂಟೆಗೆ ಎಲ್ಲರೂ ಹಾಜರ್ ಆಗಬೇಕೆಂದು sms ಸಂದೇಶ ಕಳಿಸಲಾಗಿತ್ತು. ಎಲ್ಲರು ಬಂದು ಸೇರುತ್ತಿರಬೇಕಾದರೆ ಗೆಳೆಯನೊಬ್ಬನ ಕಣ್ಣು ಕೆಂಪು ಮಾಡಿಕೊಂಡು ಬಂದಿದ್ದ. ಆತ ಎಂದಿನಂತೆ ಉಲ್ಲಾಸಭರಿತನಾಗಿರಲಿಲ್ಲ. ಮುಖದಲ್ಲಿ ಮಾಸಿ ಹೋದ ಕಳೆ. ಮನದಲ್ಲಿ ಏನೋ ಕಳೆದುಕೊಂಡ ಭಾವನೆ. ಏನಪ್ಪಾ ಮಾರಾಯ ನಿನ್ನ ಅವಸ್ತೆ ಎಂದರೆ ಆಟ ತೆರೆದಿರಿಸಿದ್ದು ಆತನ ಪ್ರೇಮ ಕಥೆಯನ್ನು. ಪ್ರೀತಿ ಎಂಬ topic ತುಂಬಾ ಇಂಟರೆಸ್ಟಿಂಗ್ ಆದ ಕಾರಣ ಗೆಳೆಯರೆಲ್ಲರೂ ಕಿವಿ ನೆಟ್ಟಗೆ ಮಾಡಿಕೊಂಡು ಸುತ್ತ ಕುಳಿತರು. ಅದೊಂದು ವಿಚಿತ್ರ, ನಂಬಲು ಅಸಾಧ್ಯವಾದ ಕಥೆ. ಆರ್ಕುಟ್ ಎಂಬ social networking site ನಿಂದ ಆರಂಭವಾದ ಪ್ರೇಮ ಕಾವ್ಯ. ಆತ ತನ್ನ ಕಥೆ ಆರಂಬಿಸಿದ.
ಎಂದಿನಂದೆ orkut ಗೆ ಲಾಗಿನ್ ಆಗಿದ್ದೆ. ದಿನಕ್ಕೆ ೫ ಬಾರಿಯಾದರೂ ಆ ಪ್ರವಾಹದ ಒಳಗೆ ನುಗ್ಗಿ ಯಾರಾದರೂ ಸ್ಕ್ರಾಪ್ ಬರೆದರೆ ಎಂದು ನೋಡುವ ಕುತೂಹಲ. ಅಂದು ಲಾಗಿನ್ ಆದಾಗ ಕಂಡದ್ದೇ ಒಂದು friendship request. ಅದರ ಜೊತೆ ಒಂದು ಒಕ್ಕಣೆ ಬೇರೆ. ನಾನು ನಿಮ್ಮನ್ನು ಒಂದು community ಯಲ್ಲಿ ಭೇಟಿಯಾಗಿದ್ದೇನೆ, ದಯವಿಟ್ಟು ನನ್ನ ಗೆಳೆತನವನ್ನು ಸ್ವೀಕರಿಸಿ. ನಾನಂತು ಅಂದು ಫುಲ್ ಖಿಶಿಯಗಿದ್ದೆ. ಹುಡುಗಿಯೆಂದರೆ ಮೂಗು ಮುರಿಯುತ್ತಿದ್ದ ನಾನು ಯಾರೋ ಒಬ್ಬಳು ಅಪರಿಚಿತ ಹುಡುಗಿ ನನಗೆ ಗೆಳೆತನದ ಸಲಹೆಯನ್ನು ನೀಡಿದರೆ ತಿರಸ್ಕರಿಸಲು ಸದ್ಯವೇ ? ಆರ್ಕುಟ್ ನ ಮಾಯಾಜಾಲವೇ ಅಂತದ್ದು. ವಿಧ ವಿಧದ ಪ್ರಾಣಿಗಳನ್ನು ಸ್ನೇಹದ ಕಡಲಲ್ಲಿ ಸೇರಿಸುವ ಒಡಲು. ಯಾರೋ ತಿಳಿಯದವರನ್ನು ಕೂಡ ನಮ್ಮ ಪರಮಾಪ್ತ ಗೆಳೆಯರನ್ನಾಗಿಸುವ ಶಕ್ತಿ ಇದೆ.
ಈ ತರ ಆರಂಭವಾದ ಗೆಳೆತನ scrap ಮೂಲಕ ಸ್ವಲ್ಪ ದಿನದೆಲ್ಲೇ g-talk ಗೆ ತಲಪಿತ್ತು. ದಿನಕಳೆಯುತ್ತಿದ್ದಂತೆ ನಾವಿಬ್ಬರೂ ಬಹಳ ಹತ್ತಿರದ ಗೆಳೆಯರಾಗಿದ್ದೆವು. ನನಗೂ ಕೊಂಚ ಮಾತು ಜಾಸ್ತಿ. ಅವಳಿಗೂ ಅದೇ ಬೇಕಾಗಿತ್ತು. ಸಾಯಂಕಾಲ ೫ ಗಂಟೆ ಆಗಬೇಕಾದರೆ ಅವಳು ತರಾತುರಿಯಲ್ಲಿ ಆಫೀಸ್ನಿಂದ ಮನೆಗೆ ಬಂದು chat ಮಾಡಲು ಕೂರುತ್ತಿದ್ದಳು. ಕೆಲ ದಿನವಂತೂ ನಾನು online ಇಲ್ಲದಿದ್ದರೆ , ನಾನು ಸ್ವಲ್ಪ ಫ್ರೀ ಇದ್ದೇನೆ , online ಬಂದು ತಲೆ ತಿನ್ನಿ ಅಂತ sms ಕಳಿಸುತ್ತಿದ್ದಳು. ದಿನದ ಆಗು ಹೋಗುಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಕಷ್ಟ ಸುಖ ಗಳನ್ನೂ ಹಂಚಿಕೊಳ್ಳುತ್ತಿದ್ದೆವು. ತುಂಬಾ ಸಲಿಗೆಯಿಂದಲೇ ಮಾತನಾಡುತ್ತ ಇದ್ದೆವು. ಇದ್ದಕ್ಕಿದ್ದಂತೆ ಅದೊಂದು ದಿನ ನಾನು ಹಳ್ಳಿಗೆ ಹೋಗಬೇಕಾಗಿತ್ತು. ಬಸ್ ಹತ್ತಿ e -mail ಚೆಕ್ ಮಾಡುತ್ತಿದ್ದಂತೆ ಗೋಚರಿಸಿದ್ದು miss you ಕಾರ್ಡ್. ಏನಮ್ಮ ನಿಂದು, ಮಿಸ್ ಗಿಸ್ಸ್ ಅಂತೆಲ್ಲ ಕಾರ್ಡ್ ಕಳಿಸ್ತಿಯಲ್ಲ, ನಾನೇನು permanent ಆಗಿ ಹಳ್ಳಿಯಲ್ಲಿ ಇರ್ತೆನಾ, ಇನ್ನೆರಡು ದಿನಕ್ಕೆ ಪುನಃ ನಗರದತ್ತ ಬರುತ್ತಿದ್ದೇನೆ ಎಂದು ಹಿವಿ ಹಿಂಡಿ ಹೇಳಿದ್ದೆ. ಹಾಗೆ ಅವಳು ನನಗೆ ಒಂದು ಸೂಚನೆಯನ್ನು ಕೊಟ್ಟಿದ್ದಳು . ಮನೆಯಲ್ಲಿ ಮಾಡುವೆ ಏರ್ಪಾಡು ಮಾಡುತ್ತಿದ್ದಾರೆ , ನನಗೇಕೋ ನೀನೆ ಕನಸಲ್ಲಿ ಬರ್ತಾ ಇದ್ದೆಯಾ ಅಂದಾಗ ಅವಳ ಒಳ್ಳೆತನವನ್ನು ಮಾತಿನಲ್ಲೇ ಅರಿತ ನಾನು ಒಂದಾಗುವ ಸೂಚನೆಯನ್ನು ನೀಡಿದ್ದೆ. ಹೀಗೆ ನಡೀತಾ ಇರಬೇಕಾದರೆ ನಮ್ಮ ಪ್ರೀತಿ ವಿಷಯ ಅವಳ ಅಣ್ಣನ ಗಮನಕ್ಕೆ ಬಂದು ಮನೆಯಲ್ಲಿ ರಂಪ ನಡೆದದ್ದೂ ಹೇಳಿದ್ದಳು. ಇನ್ನೆರಡು ವರ್ಷ ಬಿಟ್ಟು ಮಾಡುವೆ ಆಗೋಣ ಎಂದಾಗ ಅವಳು ಒಪ್ಪಿಕೊಂಡಿದ್ದಳು. ಸ್ವಲ್ಪ ದಿನ ಕಳೆಯುತ್ತಿದ್ದಂತೆ ಅವಳು shocking ನ್ಯೂಸ್ ತೆಗೆದುಕೊಂಡು ಬಂದಿದ್ದಳು. ನನಗೆ ಮದುವೆ ಮಾಡಿಸಲು ಅಂತ ಮುಂದಿನ ತಿಂಗಳು ಮದುವೆ ಹಾಲ್ ಬುಕ್ ಮಾಡಿದ್ದಾರೆ, ನನಗೆ ನಿನ್ನನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎಂದು ಅಳುತ್ತ ಹೇಳಿದ್ದಳು. ಮರುದಿನವೇ ಅವಳ ಅಣ್ಣ ಫ್ಯಾಮಿಲಿ ಫ್ರೆಂಡ್ ಅಂತ ಯಾರನ್ನೋ ಕರೆದುಕೊಂಡು ಬಂದಿದ್ದ. ಅವರು ಬಂದು ನಮಗೆ ಹುಡುಗಿ ಓಕೆ ಅಂದಾಗಲೇ ಇವಳಿಕೆ ಗೊತ್ತಾದದ್ದು ಅವರು ಹುಡುಗಿ ನೋಡಲು ಬಂದವರೆಂದು. ಅಣ್ಣ ಮತ್ತು ಅಪ್ಪ ಅಂದು ಬಲವಂತವಾಗಿ ಒಪ್ಪಿಸಿದ್ದರು. ಅಂದೇ ಆಕೆಗೆ engagement ಅನ್ನೋ ಶಾಸ್ತ್ರ ಮುಗಿಸಿ commit ಮಾಡಿಸಿದ್ದರು. ನನ್ನ ಕನಸನ್ನು ನುಚ್ಚು ನೂರು ಮಾಡಿ ಆಕೆ ಅವನ ಕೈ ಹಿಡಿಯಲು ಒಪ್ಪಿದ್ದಳು. ಏಕೆ ಹೀಗೆ ಮಾಡಿದೆ ಅಂದರೆ ಅವಳ ಬಳಿ ಉತ್ತರವಿರಲಿಲ್ಲ. ಬಹಳ ಕಾಲ ಅಳುತ್ತಲೇ ಮಾತನಾಡಿದ್ದಳು. ನನ್ನನ್ನು ಕ್ಷಮಿಸಿ ಎಂದಸ್ಟೇ ಬಹಳ ಬಾರಿ ಹೇಳಿದ್ದಳು. ನಿಮ್ಮ ಗೆಳೆತನ ಬೇಕು , ಅದನ್ನು ಕಳೆದುಕೊಳ್ಳಲು ನಾನು ತಯಾರಿಲ್ಲ , ನಾವಿಬ್ಬರೂ ಗೆಳೆಯರಾಗೆ ಇರೋಣ ಅಂದು ನನ್ನ ಕೈಯಿಂದ ಪ್ರಾಮಿಸ್ ಮಾಡಿಸಿದ್ದಳು.
ಅದಾಗಲೇ ಅವಳ ಮದುವೆ ಸಮೀಪಿಸಿತ್ತು. ಅದೊಂದು ದಿನ ಆರ್ಕುಟ್ ನೋಡ್ತಾ ಇರಬೇಕಾದರೆ ನನಗೊಂದು ಶಾಕ್ ಕಾದಿತ್ತು. ಇವಳು ನನ್ನದೆಂದು ಹೇಳಿದ್ದ ಫೋಟೋ ಬೇರೆ ಯಾರದೋ ಪ್ರೊಫೈಲ್ ಫೋಟೋ ದಲ್ಲಿ ಇತ್ತು. ಯಾರೋ ಗೆಳೆಯರನ್ನ ಕೇಳಬೇಕಾದರೆ ಅದ್ಯಾರೋ ಫಿಲಂ ನಟಿ ಇರಬಹುದೆಂದು ಹೇಳಿದ್ದರು. ನಾನಂತೂ ಅಂದು ಮೂರ್ಚೆ ಹೋಗುವುದೊಂದೇ ಬಾಕಿ. ಪ್ರತಿ ಬಾರಿ ಕೇಳಿದಾಗಲೂ ಆಕೆ ಯಾಕೆ ಫೋಟೋ ಕಳಿಸುತ್ತಾ ಇರಲಿಲ್ಲ ಎಂಬುದು ಅಂದು ನನಗೆ ಮನವರಿಕೆ ಆಗಿತ್ತು. ಆಕೆಗೆ ಮೊದಲೇ ಈ ತರ ಆಗಬಹುದು ಎಂಬ ಹೆದರಿಕೆ ಇತ್ತೋ ಏನೋ.
ಕೆಲದಿನಗಳಲ್ಲೇ ಅವಳ ಮದುವೆ ಆಗಿತ್ತು. ಬೇಸತ್ತು, ಅವಳ ಫೋನ್ ನಂಬರ್ ನ್ನು ನಾನೆ delete ಮಾಡಿದ್ದೆ. ಏಕೈಕ ಕೊಂಡಿಯಾಗಿ g -mail ಮಾತ್ರ ಇತ್ತು. ಸ್ವಲ್ಪ ದಿನದಲ್ಲೇ ಚಾಟ್ ಗೆ ರಿಪ್ಲೈ ಬರೋದು ಕೂಡ ನಿಂತು ಹೋಯಿತು. ಇವಳೇನಾ ನನ್ನ ಗೆಳತಿ ಅನ್ನೋವಸ್ತು ಜಿಗುಪ್ಸೆ ಬರತೊಡಗಿತ್ತು. ಮಗದೊಂದು ದಿನ ಮೇಲ್ ಕಲಿಸಿದರೆ , ಆಕೆ ಆಗಲೇ ಏಕೈಕ ಕೊಂಡಿಯನ್ನು ಕಟ್ ಮಾಡಿದ್ದಳು. ಅಕೌಂಟ್ ಡಿಲೀಟ್ ಆಗಿತ್ತು. ಅಂದಂತು ನಾನು ಬಿಕ್ಕಳಿಸಿ ಅತ್ತಿದ್ದೆ. ಆಕಾಶವೇ ತಲೆ ಮೇಲೆ ಬಿದ್ದಿತ್ತು. ನಾನು ಒಬ್ಬ ಗೆಳತಿಯನ್ನು ಕಳೆದುಕೊಂಡಿದ್ದೆ.
ಗೆಳೆಯ, ಅದ್ಯಾಕೆ ಅವಳು ನನ್ನ ಗೆಳೆತನವೂ ಬೇಡ ಅಂತ ಡಿಸೈಡ್ ಮಾಡಿದೆಯೋ ಅಂತ ನನಗೆ ಇನ್ನು ಗೊತ್ತಾಗಿಲ್ಲ. ಅವಳಿಗೆ ಬೇಡವಾದ ಗೆಳೆತನ ನನಗೆ ಏತಕೆ ಎಂದು ನಾನು ಮರೆಯುತ್ತ ಇದ್ದೇನೆ ಎಂದು ಹೇಳಿ ಗೆಳೆಯ ನಿಟ್ಟುಸಿರು ಬಿಟ್ಟಿದ್ದ. ನಾವೆಲ್ಲರೂ ಮುಖ ಮುಖ ನೋಡ್ತಾ ಇದ್ದೆವು. ಎಲ್ಲರೂ ಆತನನ್ನು ಸಮಾಧಾನ ಪಡಿಸಲು ಆರಂಬಿಸಿದೆವು. ನೋವನ್ನು ಹಂಚಿಕೊಂಡ ಆತ ಸ್ವಲ್ಪ ಖುಷಿ ಆಗಿದ್ದ. ಅದೇನೋ ಕೆಟ್ಟ ಕನಸು ಎಂದು ಆತ ಮರೆಯುತ್ತ ಇದ್ದಾನೆ. ಆದರೆ ನಾನಿನ್ನು ಆಕೆಯ ಬಗ್ಗೆಯೇ ಚಿಂತಿಸುತ್ತಾ ಇದ್ದೇನೆ. ಆಕೆ ಈಥರ ನನ್ನ ಗೆಳೆಯನಿಗೆ ಮೋಸ ಮಾಡಬಹುದಿತ್ತೆ .?


-

5 comments:

  1. This comment has been removed by a blog administrator.

    ReplyDelete
  2. ಹಗಲು ಕನಸು ಏನೋ ಮಜಾ ಕೊಟ್ಟಿತು.....

    ReplyDelete
  3. ಛೇ.. ಅವಳು ಈ ಥರ ನಿಮ್ಮ ಆ ’ಗೆಳೆಯನಿಗೆ’ ಮೋಸ ಮಾಡ್ಬಾರ್ದಿತ್ತು... ಎನ್ ಮಾಡೊದು... ಸಮಾಧಾನ ಮಾಡ್ಕೊಳ್ಳಿ ಸಾರ್...

    ಪ್ರೀತಿಯಿಂದ,
    ಗಿರಿ

    ReplyDelete
  4. ಉಷಾರಾಗಿ ಇರ್ಬೇಕು ಗೆಳಯ...ಆ ಹುಡುಗಿ ಹೆಸರಲ್ಲಿ ಚಾಟ್ ಮಾಡೋರು ಪಕ್ಕದಲ್ಲೇ ಇರೋ ನಿಮ್ಮ ಗೆಳಯನೆ ಆಗಿರುವ ಸಾದ್ಯತೆಗಳು ಇವೆ

    ReplyDelete